ಜಿ.ಎಸ್.ಯುಧಿಷ್ಠಿರ

ಸಂಪಾದಕ
ಸಂತೋಷ್ ಕಾವೇರಿ

ವ್ಯವಸ್ಥಾಪಕ ನಿರ್ದೇಶಕ
ಅರವಿಂದ್ ಶೆಟ್ಟಿ

ಪ್ರಸರಾಣಾಧಿಕಾರಿ
ಚಿರುಧ್ರುವ

ವಿನ್ಯಾಸಕಾರ
ದೈತ್ಯನ ಸಿಕ್ಸರ್ ದಾಖಲೆ!

ದೈತ್ಯನ ಸಿಕ್ಸರ್ ದಾಖಲೆ!

ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ದಾಂಡಿಗ ಕ್ರಿಸ್ ಗೇಲ್ ಒಂದೇ ಪಂದ್ಯದಲ್ಲಿ ಹಲವು ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ತಮ್ಮ ಕ್ರಿಕೆಟ್ ವೃತ್ತಿ ಜೀವನದ 24 ನೇ ಏಕದಿನ ಪಂದ್ಯವನ್ನಾಡಿರುವ ಕ್ರಿಸ್ ಗೇಲ್, 135 ರನ್ ಗಳಿಸಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರನೆಂಬ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆಯ ಖ್ಯಾತಿ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ ಅವರ ಹೆಸರಿನಲ್ಲಿತ್ತು. 2019 ರ ವಿಶ್ವಕಪ್ ನಂತರ ನಿವೃತ್ತಿಯಾಗುವುದಾಗಿ ಘೋಷಿಸಿರುವ ಕ್ರಿಸ್ ಗೇಲ್ ಖಾತೆಯಲ್ಲಿ ಒಟ್ಟು 477 ಸಿಕ್ಸರ್ ಗಳಿದ್ದು, 476 ಸಿಕ್ಸರ್ ಗಳನ್ನು ದಾಖಲಿಸಿದ್ದ ಶಾಹಿದ್ ಅಫ್ರೀದಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 129 ಎಸೆತಗಳ ಇನ್ನಿಂಗ್ಸ್ ನಲ್ಲಿ 12 ಸಿಕ್ಸರ್ ಗಳನ್ನು ದಾಖಲಿಸಿರುವ ಕ್ರಿಸ್ ಗೇಲ್ ತಂಡ ಒಟ್ಟಾರೆ 23 ಸಿಕ್ಸರ್ ಗಳನ್ನು ದಾಖಲಿಸಿದ್ದು ಏಕದಿನ ಪಂದ್ಯದಲ್ಲಿ ಇದೊಂದು ಹೊಸ ದಾಖಲೆಯಾಗಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರನ್...

ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ ಭಾರತ ತಂಡಕ್ಕೆ ನಿಷೇಧ; ಐಸಿಸಿ ಚಿಂತನೆ!

ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ ಭಾರತ ತಂಡಕ್ಕೆ ನಿಷೇಧ; ಐಸಿಸಿ ಚಿಂತನೆ!

ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಆಡುವುದನ್ನು ಬಿಸಿಸಿಐ ಬಹಿಷ್ಕರಿಸಿದರೆ, ಭಾರತ ತಂಡವನ್ನೇ ಐಸಿಸಿ ನಿಷೇಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು.. ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು ಎಂಬ ವಾದ ಗಟ್ಟಿಯಾಗಿ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಈ ವಿಚಾರದ ಸಾಧಕ-ಬಾಧಕಗಳ ಕುರಿತೂ ಭಾರಿ ಚರ್ಚೆಗಳು ನಡೆಯುತ್ತಿವೆ. ನಿನ್ನೆಯಷ್ಟೇ ಒಂದೇ ವೇಳೆ ಭಾರತ ತಂಡ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಆಡಲು ಒಪ್ಪದಿದ್ದರೆ ಆಗ ಆ ಪಂದ್ಯಗಳಲ್ಲಿ ಪಾಕಿಸ್ತಾನವೇ ಜಯ ಗಳಿಸಿದೆ ಎಂದು ಅಂಕ ನೀಡುವ ಸಾಧ್ಯತೆಗಳ ಕುರಿತು ಚರ್ಚೆಯಾಗಿತ್ತು. ಆದರೆ ಇದೀಗ ಅದಕ್ಕಿಂತಲೂ ಮಿಗಿಲಾಗಿ ಐಸಿಸಿ ಇನ್ನೂ ಒಂದು ಹೆಜ್ಜೆ ಮುಂದೆ ಕ್ರಿಕೆಟ್ ನಿಂದಲೇ ಭಾರತ ತಂಡದ ಮೇಲೆ ನಿಷೇಧ ಹೇರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಐಸಿಸಿ ನಿಯಮಗಳ ಅನ್ವಯ ತನ್ನ ಸದಸ್ಯ ರಾಷ್ಟ್ರ ನಿಗದಿತ ಟೂರ್ನಿಯಲ್ಲಿ ಯಾವುದೇ ಕಾರಣಕ್ಕೂ ಪಾಲ್ಗೊಳ್ಳದೇ ಹೋದರೆ ಅಂತಹ ಸದಸ್ಯ ರಾಷ್ಟ್ರದ...

ಪಾಕ್ ಕಲಾವಿದರಿಗೆ ಭಾರತೀಯ ಸಿನೆಮಾ ನಿರ್ಬಂಧ!

ಪಾಕ್ ಕಲಾವಿದರಿಗೆ ಭಾರತೀಯ ಸಿನೆಮಾ ನಿರ್ಬಂಧ!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಭೀಕರ ದಾಳಿ ಬಳಿಕ ಪಾಕಿಸ್ತಾನದ ನಟ-ನಟಿಯರು ಸೇರಿದಂತೆ ಎಲ್ಲಾ ಕಲಾವಿದರಿಗೆ ಭಾರತೀಯ ಸಿನಿಮಾ ನೌಕರರ ಒಕ್ಕೂಟ(ಎಐಸಿಡಬ್ಲ್ಯೂಎ) ನಿರ್ಬಂಧ ಹೇರಿದೆ. ಹೌದು, ಪಾಕಿಸ್ತಾನ ನಟ, ನಟಿಯರು ಹಾಗೂ ಇತರೆ ಕಲಾವಿದರ ಮೇಲೆ ಶಾಶ್ವತ ನಿಷೇಧ ಹೇರುವುದಾಗಿ ಎಐಸಿಡಬ್ಲ್ಯೂಎ ಹೇಳಿದೆ. ಒಂದು ವೇಳೆ ಯಾವುದೇ ನಿರ್ಮಾಪಕ ಪಾಕಿಸ್ತಾನ ಕಲಾವಿದರ ಜತೆ ಕೆಲಸ ಮಾಡುವ ಬೇಡಿಕೆ ಇಟ್ಟರೆ ಆ ನಿರ್ಮಾಪಕರನ್ನೇ ಒಕ್ಕೂಟದಿಂದ ನಿಷೇಧಿಸಲಾಗುವುದು ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಎಐಸಿಡಬ್ಲ್ಯೂಎ ನಿರ್ಧಾರಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ.